ಗಂಗಾವತಿ ಬಿಜೆಪಿ ಮುಖಂಡ ವೆಂಕಟೇಶ್ ಕುರುಬರ್ ಹತ್ಯೆ: ಆರು ಆರೋಪಿಗಳಿಗೆ ಗಲ್ಲು ಶಿಕ್ಷೆ

Intro:
ಗಂಗಾವತಿಯಿಂದ ಬಂದ ಬೆಚ್ಚಿಬೀಳಿಸುವ ತೀರ್ಪು… ಬಿಜೆಪಿ ಮುಖಂಡನ ಹತ್ಯೆ ಪ್ರಕರಣಕ್ಕೆ ನ್ಯಾಯಾಲಯ ಕೊಟ್ಟಿದೆ ಕಠಿಣ ಶಿಕ್ಷೆ…

Main:
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ವೆಂಕಟೇಶ್ ಕುರುಬರ್ ಹತ್ಯೆ ಪ್ರಕರಣದಲ್ಲಿ ಆರು ಜನ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.
ಗಂಗಾವತಿ ಒಂದನೇ ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ಈ ಮಹತ್ವದ ತೀರ್ಪು ನೀಡಿದ್ದಾರೆ.

ಪ್ರಕರಣದಲ್ಲಿ ರವಿ, ವಿಜಯ್ ಅಲಿಯಾಸ್ ಮೈಲಾರಿ, ಧನರಾಜ್, ಭೀಮ್ ಅಲಿಯಾಸ್ ಭರತ್, ಸಲೀಂ ಮತ್ತು ಗಂಗಾಧರ್ ದೋಷಿಗಳೆಂದು ಸಾಬೀತಾಗಿದ್ದು, ಅವರಿಗೆ ಗಲ್ಲು ಶಿಕ್ಷೆ ಜೊತೆಗೆ ತಲಾ 3 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ಈ ಕೊಲೆ 2025ರ ಅಕ್ಟೋಬರ್ 8ರಂದು ನಡೆದಿದ್ದು, ಹಳೆಯ ವೈಷಮ್ಯ ಮತ್ತು ಹಿಂದಿನ ಕೊಲೆ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ಕಾರಣಕ್ಕೆ ವೆಂಕಟೇಶ್ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು.

Outro:
ಸಾಕ್ಷಿಯಾಗಿದ್ದ ಕಾರಣ ಜೀವ ಕಳೆದುಕೊಂಡ ನಾಯಕನಿಗೆ ಈಗ ನ್ಯಾಯ ಸಿಕ್ಕಿದಂತಾಗಿದೆ… ಆದರೆ ಈ ತೀರ್ಪು ಸಮಾಜಕ್ಕೆ ಎಂತಹ ಸಂದೇಶ ನೀಡುತ್ತದೆ ಎಂಬುದು ಗಮನಾರ್ಹ…

Leave a Reply

Your email address will not be published. Required fields are marked *