
ಟಾಲಿವುಡ್ನ ಹಿಟ್ ಜೋಡಿ ನಾಗಾರ್ಜುನ ಮತ್ತು ಟಬು ಮತ್ತೆ ಒಂದಾಗುತ್ತಿರುವ ಸುದ್ದಿ ಸಿನಿ ಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ. ದಶಕಗಳ ಹಿಂದೆ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ಮಿಂಚಿದ್ದ ಈ ಜೋಡಿ ಈಗ 28 ವರ್ಷಗಳ ಬಳಿಕ ಮತ್ತೆ ತೆರೆಗೆ ಬರುತ್ತಿದೆ.
ನಾಗಾರ್ಜುನ ತಮ್ಮ 100ನೇ ಸಿನಿಮಾದಾದ ‘ಕಿಂಗ್ 100’ನಲ್ಲಿ ಅಭಿನಯಿಸುತ್ತಿದ್ದು, ಈ ಸಿನಿಮಾದಲ್ಲಿ ಟಬು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಟಬು ಶೂಟಿಂಗ್ ಆರಂಭಿಸಿದ್ದು, ಸೆಟ್ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಸಿನಿಮಾ ತಂದೆ-ಮಗಳ ಭಾವನಾತ್ಮಕ ಬಾಂಧವ್ಯದ ಕಥೆಯನ್ನು ಹೊಂದಿದ್ದು, ನಾಗಾರ್ಜುನ ವಿಭಿನ್ನ ಲುಕ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡೀ-ಏಜಿಂಗ್ ತಂತ್ರಜ್ಞಾನವೂ ಬಳಸಲಾಗುತ್ತಿದೆ.
ಹಿಂದೆ ‘ನಿನ್ನೆ ಪೆಳ್ಳಾಡತಾ’ ಮತ್ತು ‘ಆವಿಡ ಮಾ ಆವಿಡೇ’ ಸಿನಿಮಾಗಳಲ್ಲಿ ಸೂಪರ್ ಹಿಟ್ ಜೋಡಿಯಾಗಿದ್ದ ನಾಗಾರ್ಜುನ-ಟಬು ಇದೀಗ ಮತ್ತೆ ಒಂದಾಗುತ್ತಿರುವುದು ಅಭಿಮಾನಿಗಳಿಗೆ ವಿಶೇಷ ಸಂತೋಷ ತಂದಿದೆ.

