
ಶೀರ್ಷಿಕೆ:
ನಾಲ್ವರು ಸಾಗುತ್ತಿದ್ದ ಬೈಕ್ಗೆ ಟಿಪ್ಪರ್ ಡಿಕ್ಕಿ: ಇಬ್ಬರ ಸಾವು, ಯುವತಿ ಕಾಲು ಕಟ್
ರಾಯಚೂರು:
ಜಾತ್ರೆ ಮುಗಿಸಿ ವಾಪಸಾಗುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿ, ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಅತ್ತನೂರು ದಿಡ್ಡಿ ಬಸವೇಶ್ವರ ಜಾತ್ರೆಗೆ ತೆರಳಿದ್ದ ನಾಲ್ವರು ಒಂದೇ ಬೈಕ್ನಲ್ಲಿ ವಾಪಸ್ಸಾಗುತ್ತಿದ್ದರು. ಈ ವೇಳೆ ಸಿರವಾರ ತಾಲೂಕಿನ ಶಾಖಾಪುರ ಮುಖ್ಯರಸ್ತೆಯಲ್ಲಿ ಬೈಕ್ಗೆ ಟಿಪ್ಪರ್ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ಜಜ್ಜಿಹೋಗಿದ್ದು, ಮೃತರ ದೇಹಗಳು ನಜ್ಜುಗುಜ್ಜಾಗಿ ಛಿದ್ರ ಛಿದ್ರವಾಗಿವೆ. ಸ್ಥಳದಲ್ಲೇ ಬೈಕ್ ಸವಾರ 37 ವರ್ಷದ ಅಂಜಿನಯ್ಯ ನಾಯಕ ಹಾಗೂ 10 ವರ್ಷದ ಬಾಲಕಿ ಅರ್ಚನಾ ಮೃತಪಟ್ಟಿದ್ದಾರೆ.
ಇನ್ನಿಬ್ಬರು ಮಹಿಳೆಯರಾದ 19 ವರ್ಷದ ಶ್ವೇತಾ ಮತ್ತು 22 ವರ್ಷದ ಲಕ್ಷ್ಮಿ ಗಂಭೀರವಾಗಿ ಗಾಯಗೊಂಡಿದ್ದು, ಶ್ವೇತಾ ಅವರ ಕಾಲು ಕಟ್ ಆಗಿದೆ. ಇಬ್ಬರನ್ನೂ ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಸಂಬಂಧ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

