ಹುಟ್ಟುಹಬ್ಬದ ಸಂಭ್ರಮವೇ ದುರಂತ: ಕೇಕ್ ಹಚ್ಚಿದಕ್ಕೆ ಸ್ನೇಹಿತರನ್ನು ಕೊಂದ ಯುವಕ

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಬೆಚ್ಚಿಬೀಳಿಸುವಂತಹ ಘಟನೆ ನಡೆದಿದೆ. ಸಾಮಾನ್ಯವಾಗಿ ಸಂತೋಷದಿಂದ ನಡೆಯಬೇಕಿದ್ದ ಹುಟ್ಟುಹಬ್ಬದ ಸಂಭ್ರಮವೇ ರಕ್ತಪಾತದಲ್ಲಿ ಅಂತ್ಯವಾಗಿದೆ.

ಬರ್ತ್‌ಡೇ ಪಾರ್ಟಿಯ ವೇಳೆ ಸ್ನೇಹಿತರು ಬರ್ತ್‌ಡೇ ಬಾಯ್ ಮುಖಕ್ಕೆ ಕೇಕ್ ಹಚ್ಚಿದ್ದಾರೆ. ಇದೇ ವಿಚಾರ ಜಗಳಕ್ಕೆ ಕಾರಣವಾಗಿ, ಕ್ಷಣಾರ್ಧದಲ್ಲಿ ಪರಿಸ್ಥಿತಿ ತೀವ್ರಗೊಂಡಿದೆ.

ಜಗಳ ತಾರಕಕ್ಕೇರುವಷ್ಟರಲ್ಲಿ ಬರ್ತ್‌ಡೇ ಬಾಯ್ ಜೀತು ಸೈನಿ ತನ್ನ ಸ್ನೇಹಿತರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ದಾಳಿಯಲ್ಲಿ ಅಮರ್‌ದೀಪ್ ಸೈನಿ, ಮನೀಶ್ ಸೈನಿ ಮತ್ತು ಆಕಾಶ್ ಸೈನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಭೀತಿಯ ವಾತಾವರಣ ನಿರ್ಮಿಸಿದೆ.

Leave a Reply

Your email address will not be published. Required fields are marked *