ಬೈರತಿ ಬಸವರಾಜ್ಗೆ ಮತ್ತೊಂದು ಸಂಕಷ್ಟ: ಆಪ್ ನಾಯಕಿ ಕಾರು ಧ್ವಂಸ ಆರೋಪ
ಬೆಂಗಳೂರು: ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಈಗಾಗಲೇ ಜಾಮೀನು ಪಡೆದಿರುವ ಕೆ.ಆರ್. ಪುರಂ ಶಾಸಕ ಬೈರತಿ ಬಸವರಾಜ್ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಆಮ್ ಆದ್ಮಿ ಪಕ್ಷದ ನಾಯಕಿ ಸತ್ಯವಾಣಿ ಅವರು ತಮ್ಮ ಕಾರನ್ನು ಶಾಸಕರ ಬೆಂಬಲಿಗರು ಧ್ವಂಸಗೊಳಿಸಿದ್ದಾರೆ ಹಾಗೂ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ಕಮಿಷನರ್ಗೆ ದೂರು ನೀಡಿದ್ದಾರೆ. ಚುನಾವಣಾ ರಾಜಕೀಯದ ದ್ವೇಷದಿಂದ ತನ್ನ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ ಎಂದು ಆರೋಪಿಸಿರುವ ಅವರು, ಕಳೆದ ತಿಂಗಳು ತಮ್ಮ ವಿರುದ್ಧ ದೊಡ್ಡ ಮಟ್ಟದ ಫ್ಲೆಕ್ಸ್ ಅಭಿಯಾನ…

