ಗುಲ್ಬರ್ಗಾ ವಿವಿ ಕುಲಪತಿಗೆ ಆ್ಯಸಿಡ್ ದಾಳಿ ಬೆದರಿಕೆ
ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಬಿಇಡಿ ಪರೀಕ್ಷಾ ಅಕ್ರಮ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಬಿಇಡಿ ಮೌಲ್ಯಮಾಪನ ಹಗರಣ ಬಯಲಿಗೆಳೆದ ಕುಲಪತಿ ಪ್ರೊ. ಶಶಿಕಾಂತ್ ಅವರಿಗೆ ಆ್ಯಸಿಡ್ ದಾಳಿ ಮಾಡುವುದಾಗಿ ಅನಾಮಧೇಯ ಪತ್ರದ ಮೂಲಕ ಬೆದರಿಕೆ ಹಾಕಲಾಗಿದೆ. 2024ರ ಬಿಇಡಿ ಪರೀಕ್ಷೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ಕುಲಪತಿಗಳು ತನಿಖೆಗೆ ಆದೇಶಿಸಿದ್ದು, ರಾಜ್ಯಪಾಲರ ಸೂಚನೆಯಂತೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆಯಾಗಿದೆ. ಸದ್ಯ ಮರುಮೌಲ್ಯಮಾಪನ ಪ್ರಕ್ರಿಯೆ ನಡೆಯುತ್ತಿದ್ದು, ಇದರಿಂದ ಅಕ್ರಮವಾಗಿ ಅಂಕ ಪಡೆದವರಿಗೆ ಆತಂಕ ಶುರುವಾಗಿದೆ. ‘ಅಂಕ ಕಡಿಮೆಯಾದರೆ…

