ಡೆಲ್ಲಿ ಕ್ಯಾಪಿಟಲ್ಸ್‌ಗೆ ಶಾಕ್: ಯುವ ಬ್ಯಾಟರ್ ಸಾಹಿಲ್ ಪರಾಖ್ ಆಸ್ಪತ್ರೆಗೆ ದಾಖಲು
IPL 2026 ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ದೊಡ್ಡ ಆಘಾತ ಸಂಭವಿಸಿದೆ. ಅಭ್ಯಾಸದ ವೇಳೆ ಯುವ ಎಡಗೈ ಬ್ಯಾಟರ್ ಸಾಹಿಲ್ ಪರಾಖ್ ಗಂಭೀರವಾಗಿ ಗಾಯಗೊಂಡಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ನೆಟ್ಸ್ ಅಭ್ಯಾಸದಲ್ಲಿ ಈ ಘಟನೆ ಸಂಭವಿಸಿದೆ. ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ವೇಗದ ಬೌಲರ್ ಎಸೆದ ಬೌನ್ಸರ್ ಚೆಂಡು ಸಾಹಿಲ್ ಪರಾಖ್ ಅವರ ಹೆಲ್ಮೆಟ್‌ನ ಗ್ರಿಲ್ ನಡುವಿನಿಂದ ನೇರವಾಗಿ ಮುಖಕ್ಕೆ ಬಡಿದಿದೆ ಎಂದು ವರದಿಯಾಗಿದೆ. ಚೆಂಡು ತಗುಲಿದ ತಕ್ಷಣವೇ ಸಾಹಿಲ್ ಮೈದಾನದಲ್ಲೇ ಕುಸಿದು…

