ಬಾಗಲಕೋಟೆಯಲ್ಲಿ ಲೋಕಾಯುಕ್ತ ದಾಳಿ: ₹1.70 ಲಕ್ಷ ಲಂಚ ಪಡೆಯುತ್ತಿದ್ದ PSI & ಕಾನ್‌ಸ್ಟೇಬಲ್ ರೆಡ್ ಹ್ಯಾಂಡ್ ಅರೆಸ್ಟ್!
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರದ ಪ್ರಕರಣ ಬಯಲಾಗಿದೆ. ಸಾರ್ವಜನಿಕರ ಸೇವೆಗೆ ನೇಮಕವಾಗಿರುವ ಪೊಲೀಸರು ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಪಿಎಸ್‌ಐ ಭೀಮಪ್ಪ ರಬಕವಿ ಮತ್ತು ಕಾನ್‌ಸ್ಟೇಬಲ್ ಸಂತೋಷ್ ಬಿರಾದಾರ ಅವರು ಮುತ್ತಪ್ಪ ನಾಯ್ಕರ್ ಎಂಬುವವರ ಮೇಲೆ ಇಸ್ಪೀಟ್ ಮತ್ತು ಬಡ್ಡಿ ದಂಧೆ ಪ್ರಕರಣ ದಾಖಲಿಸುವ ಬೆದರಿಕೆ ಹಾಕಿದ್ದರೆಂಬ ಆರೋಪ ಕೇಳಿಬಂದಿದೆ. ಪ್ರಕರಣದಿಂದ ಹೆಸರು ಕೈಬಿಡಲು ಮತ್ತು ವಶಪಡಿಸಿಕೊಂಡಿದ್ದ ಬೈಕ್ ಬಿಡುಗಡೆ ಮಾಡಲು ₹2 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಕುರಿತು…

