ಚಿಕ್ಕಬಳ್ಳಾಪುರದಲ್ಲಿ ವಿಚಿತ್ರ ಘಟನೆ: ಕದ್ದ ಮಾಂಗಲ್ಯ ಸರ 2 ದಿನಗಳ ಬಳಿಕ ಮನೆ ಮುಂದೆ ಪ್ರತ್ಯಕ್ಷ!
ಚಿಕ್ಕಬಳ್ಳಾಪುರದಲ್ಲಿ ಅಚ್ಚರಿಯ ಘಟನೆ ಒಂದು ನಡೆದಿದ್ದು, ಕಳುವಾಗಿದ್ದ ಮಹಿಳೆಯ ಮಾಂಗಲ್ಯ ಸರ ಎರಡು ದಿನಗಳ ಬಳಿಕ ಮತ್ತೆ ಅವರ ಮನೆ ಬಳಿಯೇ ಪತ್ತೆಯಾಗಿದೆ. ನಗರದ ವಾರ್ಡ್ ನಂಬರ್ 23ರ ಚಾಮರಾಜಪೇಟೆಯಲ್ಲಿ ಮೇ 3ರಂದು ಈ ಘಟನೆ ನಡೆದಿತ್ತು. ಮನೆಯ ಮುಂದೆ ನೀರಿನ ಸಂಪ್ ಪರಿಶೀಲಿಸುತ್ತಿದ್ದ ವೇಳೆ ಗೃಹಿಣಿ ಪ್ರಿಯಾ ಅವರ ಕುತ್ತಿಗೆಯಿಂದ ಇಬ್ಬರು ದುಷ್ಕರ್ಮಿಗಳು ಮಾಂಗಲ್ಯ ಸರ ಕಿತ್ತುಕೊಂಡು ಬೈಕ್ನಲ್ಲಿ ಪರಾರಿಯಾಗಿದ್ದರು. ಪಲ್ಸರ್ 220 ಬೈಕ್ನಲ್ಲಿ ಬಂದಿದ್ದ ಆರೋಪಿಗಳಲ್ಲಿ ಒಬ್ಬ ಬೈಕ್ನಿಂದ ಇಳಿದು ಸರ ಕಿತ್ತುಕೊಂಡಿದ್ದರೆ, ಮತ್ತೊಬ್ಬ…

