ಬಹುಅಂಗಾಂಗ ವೈಫಲ್ಯದಿಂದ ಹೆಣ್ಣಾನೆ ಸಾವು – ತಾಯಿಯ ಮೃತದೇಹದ ಬಳಿ ಮರಿ ಆನೆಯ ಮೂಕರೋಧನೆ | ರಾಮನಗರದಲ್ಲಿ ಮನಕಲಕುವ ಘಟನೆ
ಬಹುಅಂಗಾಂಗ ವೈಫಲ್ಯದಿಂದ ಕಾಡಾನೆ ಸಾವು: ತಾಯಿಯ ಬಳಿ ನಿಂತು ಮರಿ ಆನೆ ಮೂಕರೋಧನೆ ರಾಮನಗರ ಜಿಲ್ಲೆಯ ಕಾವೇರಿ ವನ್ಯಜೀವಿ ವಲಯದ ಮುಗ್ಗೂರು ಅರಣ್ಯ ಪ್ರದೇಶದಲ್ಲಿ ಮನಕಲಕುವ ಘಟನೆ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಹೆಣ್ಣಾನೆಯೊಂದು ಬಹುಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದು, ಅದರ ಮೃತದೇಹದ ಬಳಿ ನಿಂತು ಮರಿ ಆನೆ ಮೂಕರೋಧನೆ ವ್ಯಕ್ತಪಡಿಸಿರುವ ದೃಶ್ಯ ಎಲ್ಲರ ಮನಸ್ಸನ್ನು ಮಿಡಿಯಿಸಿದೆ. ಕನಕಪುರ ತಾಲೂಕಿನ ಮಡಿವಾಳ ಸಮೀಪದ ಮುಗ್ಗೂರು ಅರಣ್ಯ ಪ್ರದೇಶದಲ್ಲಿ ಸುಮಾರು 35 ವರ್ಷದ ಹೆಣ್ಣಾನೆ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು…

