ಸಾರ್ವಜನಿಕ ಮೂತ್ರ ವಿಸರ್ಜನೆ ತಡೆಯಲು ಮೈಸೂರು ಪಾಲಿಕೆಯ ವಿನೂತನ ಪ್ರಯೋಗ
ಮೈಸೂರು ಪಾಲಿಕೆಯ ಹೊಸ ಪ್ರಯೋಗ: ಗೋಡೆ ಮುಂದೆ ಮೂತ್ರ ವಿಸರ್ಜನೆ ಮಾಡಿದರೆ ಎಲ್ಲರಿಗೂ ಕಾಣುತ್ತೆ! ಮೈಸೂರು, ಮೇ 6: ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡುವವರ ವಿರುದ್ಧ ಮೈಸೂರು ಮಹಾನಗರ ಪಾಲಿಕೆ ವಿನೂತನ ಕ್ರಮ ಕೈಗೊಂಡಿದೆ. ಬಸ್ ನಿಲ್ದಾಣಗಳ ಸಮೀಪ ಇರುವ ಕಾಂಪೌಂಡ್ ಗೋಡೆಗಳಿಗೆ ಸ್ಟೇನ್ಲೆಸ್ ಸ್ಟೀಲ್ ಶೀಟ್ಗಳನ್ನು ಅಳವಡಿಸಿ, ಅದನ್ನು ಕನ್ನಡಿಯಂತೆ ಬಳಸುವ ಪ್ರಯೋಗ ಆರಂಭಿಸಲಾಗಿದೆ. ಮೈಸೂರು ಕೇಂದ್ರ ಬಸ್ ನಿಲ್ದಾಣದ ಮುಂಭಾಗದ ಸುಮಾರು 80 ಮೀಟರ್ ಉದ್ದದ ಗೋಡೆಯ ಮೇಲೆ ಈ ವಿಶೇಷ ಶೀಟ್ಗಳನ್ನು…

