ಸ್ಮಶಾನದಲ್ಲಿ ಮದುವೆ! ಉರಿಯುವ ಚಿತೆಗಳ ನಡುವೆ ಸಪ್ತಪದಿ – ಉತ್ತರಾಖಂಡದಲ್ಲಿ ವಿವಾದ
ಉತ್ತರಾಖಂಡದ ಅಲ್ಮೋರಾದಲ್ಲಿ ನಡೆದ ವಿಚಿತ್ರ ಮದುವೆ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಉರಿಯುವ ಚಿತೆಗಳ ನಡುವೆ ನವ ಜೋಡಿ ಸಪ್ತಪದಿ ತುಳಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ವಿವರ:ಹೌದು, ರಾಮಗಂಗಾ ಮತ್ತು ಬದನ್ಗಢ ನದಿಗಳ ಸಂಗಮದಲ್ಲಿರುವ ಸ್ಮಶಾನದಲ್ಲಿ ಈ ಘಟನೆ ನಡೆದಿದೆ. ದಶಕಗಳಿಂದ ಅಂತ್ಯಕ್ರಿಯೆ ನಡೆಯುವ ಈ ಪವಿತ್ರ ಸ್ಥಳವನ್ನು ಪ್ರವಾಸಿಗರು ಮದುವೆ ಸ್ಥಳವನ್ನಾಗಿ ಪರಿವರ್ತಿಸಿದ್ದರು. ಚಿತೆಗಳ ನಡುವೆ ಮಂಟಪ ನಿರ್ಮಿಸಿ, ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿ ಅದ್ದೂರಿಯಾಗಿ ಮದುವೆ ನೆರವೇರಿಸಲಾಗಿದೆ….

