ಯುಗಾದಿ ಹಬ್ಬದ ಸಂಭ್ರಮಕ್ಕೆ ಮಳೆರಾಯನ ತಣ್ಣೀರು: ಮೆಜೆಸ್ಟಿಕ್‌ನಲ್ಲಿ ಮಳೆ ಆರ್ಭಟ, ಊರಿಗೆ ತೆರಳುವ ಪ್ರಯಾಣಿಕರು ಹೈರಾಣು!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನದ ನಂತರ ವರುಣನ ಆರ್ಭಟ ಜೋರಾಗಿದೆ. ಒಂದು ಕಡೆ ನಾಡಹಬ್ಬ ಯುಗಾದಿಯ ಸಂಭ್ರಮದಲ್ಲಿ ಜನರು ತಮ್ಮ ತಮ್ಮ ಊರುಗಳಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದರೆ, ಇನ್ನೊಂದೆಡೆ ಅಕಾಲಿಕ ಮಳೆಯು ಜನರ ಸಂಭ್ರಮಕ್ಕೆ ತಣ್ಣೀರು ಎರಚಿದೆ. ಅದರಲ್ಲೂ ನಗರದ ಹೃದಯಭಾಗವಾದ ಮೆಜೆಸ್ಟಿಕ್ ಪರಿಸರದಲ್ಲಿ ಮಳೆರಾಯ ಅಕ್ಷರಶಃ ಅಬ್ಬರಿಸಿದ್ದಾನೆ. ಮೆಜೆಸ್ಟಿಕ್‌ನಲ್ಲಿ ಮಳೆ ಅವಾಂತರ: ಬೆಂಗಳೂರಿನ ಸಾರಿಗೆ ಸಂಪರ್ಕದ ಕೇಂದ್ರಬಿಂದುವಾಗಿರುವ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಮಳೆಯಿಂದಾಗಿ ಭಾರಿ ಅವಾಂತರ ಸೃಷ್ಟಿಯಾಗಿದೆ. ಹಬ್ಬದ ಪ್ರಯಾಣಕ್ಕೆ ವಿಘ್ನ: ಯುಗಾದಿ ಹಬ್ಬದ…

