ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್‌ಗೆ ಬಂಡಾಯದ ಬಿಸಿ: ಸಾದಿಕ್ ಪೈಲ್ವಾನ್ ಪಟ್ಟು; ಜಮೀರ್ ಅಹ್ಮದ್ ಸಂಧಾನ ಸಕ್ಸಸ್ ಆಗುತ್ತಾ? ‘ಕೈ’ ಅಭ್ಯರ್ಥಿಗೆ ಭೀತಿ!
ಉಪಚುನಾವಣೆಯ ರಣಕಣ ಸಿದ್ಧವಾಗಿರುವಾಗಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಭದ್ರಕೋಟೆಯಲ್ಲಿ ಬಂಡಾಯದ ಬರೆ ಬೀಳುವ ಲಕ್ಷಣಗಳು ಕಾಣುತ್ತಿವೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಗದ್ದುಗೆಗಾಗಿ ಸರಣಿ ಸಭೆಗಳನ್ನು ನಡೆಸಿದ್ದ ಹೈಕಮಾಂಡ್, ಅಂತಿಮವಾಗಿ ಶಾಮನೂರು ಕುಟುಂಬದ ಸಮರ್ಥ್ ಅವರಿಗೆ ಮಣೆ ಹಾಕಿದೆ. ಆದರೆ, ಈ ನಿರ್ಧಾರವು ಕ್ಷೇತ್ರದಲ್ಲಿ ‘ಕಾಂಗ್ರೆಸ್ Vs ಮುಸ್ಲಿಂ’ ಎಂಬ ವಾತಾವರಣ ನಿರ್ಮಾಣವಾಗಲು ಕಾರಣವಾಗಿದ್ದು, ಪಕ್ಷದ ಗೆಲುವಿನ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ. ಸಾದಿಕ್ ಪೈಲ್ವಾನ್ ಪಟ್ಟು: ಹಿಂದೆ ಸರಿಯಲ್ಲ ಎಂಬ ಎಚ್ಚರಿಕೆ! ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಸಾದಿಕ್ ಪೈಲ್ವಾನ್…

