ಚಿಕ್ಕಮಗಳೂರು ಬೀರೂರು: ಕೌಟುಂಬಿಕ ಕಲಹದಿಂದ ಸಬ್ ಇನ್ಸ್‌ಪೆಕ್ಟರ್ ಪತ್ನಿ ಪದ್ಮ ಆತ್ಮಹತ್ಯೆ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ದುರಂತ ಘಟನೆ ನಡೆದಿದೆ. ಬೀರೂರು ಠಾಣೆಯ ಸಬ್ ಇನ್ಸ್‌ಪೆಕ್ಟರ್ ತಿಪ್ಪೇಶ್ ಅವರ ಪತ್ನಿ ಪದ್ಮ (34) ಕೌಟುಂಬಿಕ ಕಲಹದಿಂದ ಬೇಸತ್ತು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಮೂಲಗಳ ಪ್ರಕಾರ, ತಿಪ್ಪೇಶ್ ಮತ್ತು ಪದ್ಮ ಪ್ರೀತಿಸಿ ಮದುವೆಯಾಗಿದ್ದು, ಇಬ್ಬರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಇತ್ತೀಚೆಗೆ ದಂಪತಿಯ ನಡುವೆ ಕೌಟುಂಬಿಕ ಕಲಹ ಹೆಚ್ಚಾಗಿ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಮಂಗಳವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಪದ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಬೆಳಕಿಗೆ ಬಂದ…

Read More

ಕಾಂತಾರ’ ಹಿಟ್ ಬಳಿಕ ಹಳೆಯ ಸಿನಿಮಾ ರಿಲೀಸ್: ರಿಷಬ್ ಶೆಟ್ಟಿ ತೆಲುಗಿಗೆ ಎಂಟ್ರಿ

ಕಾಂತಾರ’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಗಳಿಸಿರುವ ರಿಷಬ್ ಶೆಟ್ಟಿ ಅವರ ಹಳೆಯ ಸಿನಿಮಾವೊಂದು ಈಗ ಮತ್ತೆ ಸುದ್ದಿಯಲ್ಲಿದೆ. ‘ಹರಿಕಥೆ ಅಲ್ಲ ಗಿರಿಕಥೆ’ ಎಂಬ ಚಿತ್ರವು ಇದೀಗ ‘ಎ ಫಿಲ್ಮ್ ಬೈ ಗಿರಿ’ ಹೆಸರಿನಲ್ಲಿ ತೆಲುಗಿಗೆ ಡಬ್ ಆಗಿ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ಮೇ 8ರಂದು ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ತೆರೆಗೆ ಬರಲಿದೆ. ವಿಶೇಷವೆಂದರೆ, ಈ ಚಿತ್ರವು 2022ರಲ್ಲಿ ‘ಕಾಂತಾರ’ ಬಿಡುಗಡೆಯಕ್ಕೂ ಮೊದಲು ತೆರೆಕಂಡಿತ್ತು. ಆಗ ಈ ಚಿತ್ರ…

Read More

ಸ್ಮಶಾನದಲ್ಲಿ ಮದುವೆ! ಉರಿಯುವ ಚಿತೆಗಳ ನಡುವೆ ಸಪ್ತಪದಿ – ಉತ್ತರಾಖಂಡದಲ್ಲಿ ವಿವಾದ

ಉತ್ತರಾಖಂಡದ ಅಲ್ಮೋರಾದಲ್ಲಿ ನಡೆದ ವಿಚಿತ್ರ ಮದುವೆ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಉರಿಯುವ ಚಿತೆಗಳ ನಡುವೆ ನವ ಜೋಡಿ ಸಪ್ತಪದಿ ತುಳಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ವಿವರ:ಹೌದು, ರಾಮಗಂಗಾ ಮತ್ತು ಬದನ್‌ಗಢ ನದಿಗಳ ಸಂಗಮದಲ್ಲಿರುವ ಸ್ಮಶಾನದಲ್ಲಿ ಈ ಘಟನೆ ನಡೆದಿದೆ. ದಶಕಗಳಿಂದ ಅಂತ್ಯಕ್ರಿಯೆ ನಡೆಯುವ ಈ ಪವಿತ್ರ ಸ್ಥಳವನ್ನು ಪ್ರವಾಸಿಗರು ಮದುವೆ ಸ್ಥಳವನ್ನಾಗಿ ಪರಿವರ್ತಿಸಿದ್ದರು. ಚಿತೆಗಳ ನಡುವೆ ಮಂಟಪ ನಿರ್ಮಿಸಿ, ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿ ಅದ್ದೂರಿಯಾಗಿ ಮದುವೆ ನೆರವೇರಿಸಲಾಗಿದೆ….

Read More

ಟಾಲಿವುಡ್‌ನ ಹಾಟ್ ಜೋಡಿ ರೀ-ಎಂಟ್ರಿ: ನಾಗಾರ್ಜುನ ಜೊತೆ ಟಬು ಮತ್ತೆ ತೆರೆಗೆ

ಟಾಲಿವುಡ್‌ನ ಹಿಟ್ ಜೋಡಿ ನಾಗಾರ್ಜುನ ಮತ್ತು ಟಬು ಮತ್ತೆ ಒಂದಾಗುತ್ತಿರುವ ಸುದ್ದಿ ಸಿನಿ ಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ. ದಶಕಗಳ ಹಿಂದೆ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ಮಿಂಚಿದ್ದ ಈ ಜೋಡಿ ಈಗ 28 ವರ್ಷಗಳ ಬಳಿಕ ಮತ್ತೆ ತೆರೆಗೆ ಬರುತ್ತಿದೆ. ನಾಗಾರ್ಜುನ ತಮ್ಮ 100ನೇ ಸಿನಿಮಾದಾದ ‘ಕಿಂಗ್ 100’ನಲ್ಲಿ ಅಭಿನಯಿಸುತ್ತಿದ್ದು, ಈ ಸಿನಿಮಾದಲ್ಲಿ ಟಬು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಟಬು ಶೂಟಿಂಗ್ ಆರಂಭಿಸಿದ್ದು, ಸೆಟ್‌ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಸಿನಿಮಾ ತಂದೆ-ಮಗಳ ಭಾವನಾತ್ಮಕ ಬಾಂಧವ್ಯದ…

Read More

ಸುಶಾಂತ್ ಸಿಂಗ್ ಪ್ರಕರಣ: 6 ವರ್ಷಗಳ ಬಳಿಕ ರಿಯಾ ಚಕ್ರವರ್ತಿಗೆ ಬ್ಯಾಂಕ್ ಹಣದ ಮೇಲಿನ ಹಕ್ಕು ಮರಳಿ!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್‌ಪೂತ್ ಸಾವಿನ ಪ್ರಕರಣ ದೇಶದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. 2020ರ ಜೂನ್‌ನಲ್ಲಿ ಮುಂಬೈನ ಮನೆಯಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಈ ಘಟನೆ ಬಳಿಕ ಹಲವು ಕೋನಗಳಲ್ಲಿ ತನಿಖೆ ನಡೆದಿದ್ದು, ಹಲವು ವಿವಾದಗಳಿಗೆ ಕಾರಣವಾಗಿತ್ತು. ಈ ಪ್ರಕರಣದಲ್ಲಿ ಮುಖ್ಯವಾಗಿ ಸುದ್ದಿಯಾದ ಹೆಸರು ನಟಿ ರಿಯಾ ಚಕ್ರವರ್ತಿ. ಸುಶಾಂತ್ ಅವರ ಮಾಜಿ ಗೆಳತಿಯಾಗಿದ್ದ ರಿಯಾ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದವು. ಪ್ರಕರಣದ ಆರಂಭದಲ್ಲಿ ಅವರನ್ನು ‘ವಿಲನ್’ ರೀತಿಯಲ್ಲಿ ಚಿತ್ರಿಸಲಾಗಿದ್ದು, ಅವರು ಜೈಲಿಗೂ…

Read More

ಮೃತ ಸಹೋದರಿಯ ಅಸ್ಥಿಪಂಜರ ಹೊತ್ತು ಬ್ಯಾಂಕ್‌ಗೆ ಬಂದ ವ್ಯಕ್ತಿ: 19,300 ರೂ.ಗಾಗಿ ಹೃದಯ ಕಲುಕುವ ಘಟನೆ

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ಹೃದಯ ಕಲುಕುವ ಹಾಗೂ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತನ್ನ ಮೃತ ಸಹೋದರಿಯ ಬ್ಯಾಂಕ್ ಖಾತೆಯಲ್ಲಿದ್ದ ಕೇವಲ 19,300 ರೂಪಾಯಿಗಳನ್ನು ಪಡೆಯಲು ವ್ಯಕ್ತಿಯೊಬ್ಬ ಅಸ್ಥಿಪಂಜರ ಹೊತ್ತು ಬ್ಯಾಂಕ್‌ಗೆ ಬಂದಿದ್ದಾನೆ. ಜಿತು ಮುಂಡಾ ಎಂಬ ಈ ವ್ಯಕ್ತಿ, ಸಹೋದರಿ ಕಾಕ್ರಾ ಮುಂಡಾ ನಿಧನವಾದ ನಂತರ ಹಣ ಪಡೆಯಲು ಬ್ಯಾಂಕ್ ಸಂಪರ್ಕಿಸಿದ್ದರು. ಆದರೆ ಖಾತೆದಾರರು ಸ್ವತಃ ಬರಬೇಕು ಅಥವಾ ಕಾನೂನುಬದ್ಧ ದಾಖಲೆಗಳನ್ನು ನೀಡಬೇಕು ಎಂದು ಬ್ಯಾಂಕ್ ಸಿಬ್ಬಂದಿ ಹೇಳಿದ ಕಾರಣ, ಅವನಿಗೆ ಯಾವುದೇ ದಾರಿ ಕಾಣಿಸಲಿಲ್ಲ….

Read More

ಮಾಟಮಂತ್ರ ಶಂಕೆ: ಅಣ್ಣನಿಂದ ತಮ್ಮನ ಕೊಲೆ, ಇಬ್ಬರು ಮಕ್ಕಳ ಮೇಲೆ ಕ್ರೂರ ಹಲ್ಲೆ – ಗುಜರಾತ್ ಬೆಚ್ಚಿಬಿತ್ತು

ಗುಜರಾತ್, ಏಪ್ರಿಲ್ 28: ಮಾಟಮಂತ್ರದ ಶಂಕೆ ಎಷ್ಟು ಭೀಕರ ಪರಿಣಾಮ ಬೀರುತ್ತದೆ ಎಂಬುದಕ್ಕೆ ನರ್ಮದಾ ಜಿಲ್ಲೆಯಲ್ಲಿ ನಡೆದ ಘಟನೆ ಬೆಚ್ಚಿಬೀಳಿಸುವ ಉದಾಹರಣೆಯಾಗಿದೆ. ಸಹೋದರನೇ ತನ್ನ ತಮ್ಮನನ್ನು ಕ್ರೂರವಾಗಿ ಹತ್ಯೆ ಮಾಡಿ, ಅವರಿಬ್ಬರು ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಆರೋಪಿ ರಮೇಶ್ ವಾಸವ ತನ್ನ ಕಿರಿಯ ಸಹೋದರ ಗುರ್ಜಿ ವಾಸವ ಮೇಲೆ ಮಾಟಮಂತ್ರ ಮಾಡುತ್ತಿದ್ದಾನೆ ಎಂಬ ಅನುಮಾನವನ್ನು ಹಲವು ವರ್ಷಗಳಿಂದ ಹೊಂದಿದ್ದ. ಇದೇ ವಿಚಾರವಾಗಿ ಸೋಮವಾರ ಇಬ್ಬರ ನಡುವೆ ತೀವ್ರ ವಾಗ್ವಾದ ಉಂಟಾಯಿತು….

Read More

SSLC ಫಲಿತಾಂಶದಲ್ಲಿ ಭಾರಿ ಎಡವಟ್ಟು: 71 ಅಂಕ ಬದಲು 12 – ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

ಕೊಪ್ಪಳ: ವಿದ್ಯಾರ್ಥಿ ಜೀವನದ ಪ್ರಮುಖ ಹಂತವಾದ SSLC ಫಲಿತಾಂಶದಲ್ಲಿ ಭಾರಿ ಎಡವಟ್ಟು ಬೆಳಕಿಗೆ ಬಂದಿದೆ. ಜಿಲ್ಲೆಯ ಕಾತರಕಿ ಗುಡ್ಲಾನೂರ ಗ್ರಾಮದ ಸಂಜನಾ ಮಡಿವಾಳ ಎಂಬ ವಿದ್ಯಾರ್ಥಿನಿ ಎಲ್ಲಾ ವಿಷಯಗಳಲ್ಲಿ ಉತ್ತಮ ಅಂಕ ಗಳಿಸಿದ್ದರೂ, ಕನ್ನಡ ವಿಷಯದಲ್ಲಿ ಕೇವಲ 12 ಅಂಕ ಮಾತ್ರ ನಮೂದಾಗಿರುವುದು ಆಘಾತಕ್ಕೆ ಕಾರಣವಾಗಿದೆ. ಪರೀಕ್ಷೆಯ ಉತ್ತರ ಪತ್ರಿಕೆಯ ನಕಲು ಪರಿಶೀಲನೆ ಮಾಡಿದಾಗ ಸಂಜನಾ ವಾಸ್ತವವಾಗಿ 71 ಅಂಕಗಳನ್ನು ಪಡೆದಿರುವುದು ಬಹಿರಂಗವಾಗಿದೆ. ಆದರೆ ತಪ್ಪು ಅಂಕ ನಮೂದು ವಿದ್ಯಾರ್ಥಿನಿಗೆ ಭಾರೀ ಮಾನಸಿಕ ಆಘಾತ ಉಂಟುಮಾಡಿದ್ದು, ಆತ್ಮಹತ್ಯೆಗೆ…

Read More

ಆಡುಗೋಡಿಯಲ್ಲಿ ಯುವತಿಯ ಭೀಕರ ಸಾವು: ಪೂಜಾ ದತ್ತ ಮೃತದೇಹ ಬೆತ್ತಲೆ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು, ಏ.27: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಘಟನೆ ಬೆಳಕಿಗೆ ಬಂದಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 34 ವರ್ಷದ ಯುವತಿ ಪೂಜಾ ದತ್ತ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಆಘಾತ ಮೂಡಿಸಿದೆ. ಆಡುಗೋಡಿ ಪ್ರದೇಶದಲ್ಲಿರುವ ಬಾಡಿಗೆ ಮನೆಯಲ್ಲಿ ಪೂಜಾ ದತ್ತ ಅವರ ಮೃತದೇಹ ಬೆತ್ತಲೆ ಹಾಗೂ ಅರೆಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಗಿಲು ಒಡೆದು ಒಳನುಗ್ಗಿದಾಗ, ಪೂಜಾ ಅವರ ಮೃತದೇಹ ಭೀಕರ…

Read More

ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಅಬ್ಬರ: ಹವಾಮಾನ ಇಲಾಖೆ ಎಚ್ಚರಿಕೆ

ರಾಜ್ಯದಲ್ಲಿ ಹವಾಮಾನದಲ್ಲಿ ಅಚಾನಕ್ ಬದಲಾವಣೆ ಕಂಡುಬಂದಿದ್ದು, ಹೀಟ್ ವೇವ್‌ನಿಂದ ತತ್ತರಿಸಿದ್ದ ಜನತೆಗೆ ಮಳೆ ಸ್ವಲ್ಪ ಮಟ್ಟಿನ ನಿರಾಳತೆ ನೀಡಲಿದೆ. ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ, ಇಂದು ರಾಜ್ಯದ ಹಲವು ಭಾಗಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಮತ್ತು ಕಲಬುರಗಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಪ್ರದೇಶಗಳಲ್ಲಿ 40-50 ಕಿ.ಮೀ ವೇಗದ ಗಾಳಿಯೊಂದಿಗೆ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ. ಇನ್ನೊಂದೆಡೆ, ಉತ್ತರ ಕನ್ನಡ,…

Read More