ಸಾರ್ವಜನಿಕ ಮೂತ್ರ ವಿಸರ್ಜನೆ ತಡೆಯಲು ಮೈಸೂರು ಪಾಲಿಕೆಯ ವಿನೂತನ ಪ್ರಯೋಗ

ಮೈಸೂರು ಪಾಲಿಕೆಯ ಹೊಸ ಪ್ರಯೋಗ: ಗೋಡೆ ಮುಂದೆ ಮೂತ್ರ ವಿಸರ್ಜನೆ ಮಾಡಿದರೆ ಎಲ್ಲರಿಗೂ ಕಾಣುತ್ತೆ!

ಮೈಸೂರು, ಮೇ 6: ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡುವವರ ವಿರುದ್ಧ ಮೈಸೂರು ಮಹಾನಗರ ಪಾಲಿಕೆ ವಿನೂತನ ಕ್ರಮ ಕೈಗೊಂಡಿದೆ. ಬಸ್ ನಿಲ್ದಾಣಗಳ ಸಮೀಪ ಇರುವ ಕಾಂಪೌಂಡ್ ಗೋಡೆಗಳಿಗೆ ಸ್ಟೇನ್‌ಲೆಸ್ ಸ್ಟೀಲ್ ಶೀಟ್‌ಗಳನ್ನು ಅಳವಡಿಸಿ, ಅದನ್ನು ಕನ್ನಡಿಯಂತೆ ಬಳಸುವ ಪ್ರಯೋಗ ಆರಂಭಿಸಲಾಗಿದೆ.

ಮೈಸೂರು ಕೇಂದ್ರ ಬಸ್ ನಿಲ್ದಾಣದ ಮುಂಭಾಗದ ಸುಮಾರು 80 ಮೀಟರ್ ಉದ್ದದ ಗೋಡೆಯ ಮೇಲೆ ಈ ವಿಶೇಷ ಶೀಟ್‌ಗಳನ್ನು ಅಳವಡಿಸಲಾಗಿದೆ. ಯಾರಾದರೂ ಗೋಡೆಯ ಮುಂದೆ ನಿಂತರೆ, ಅವರ ಪ್ರತಿಬಿಂಬ ಸ್ಪಷ್ಟವಾಗಿ ಕಾಣುತ್ತದೆ. ಇದರಿಂದ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವವರಿಗೆ ಮುಜುಗರ ಉಂಟಾಗಿ, ಈ ಕೃತ್ಯದಿಂದ ದೂರ ಉಳಿಯುವಂತೆ ಮಾಡುವ ಉದ್ದೇಶ ಪಾಲಿಕೆಯದ್ದಾಗಿದೆ.

ಸುಮಾರು 9.5 ಲಕ್ಷ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಾದ ಈ ಯೋಜನೆ ರಾಜ್ಯದಲ್ಲೇ ಮೊದಲ ಪ್ರಯೋಗ ಎನ್ನಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪಾಲಿಕೆಯ ಈ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಈ ಹಿಂದೆ ದಂಡ, ಎಚ್ಚರಿಕೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡರೂ ಸಮಸ್ಯೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿರಲಿಲ್ಲ. ಇದೀಗ ಕನ್ನಡಿಯ ಮಾದರಿಯ ಸ್ಟೀಲ್ ಶೀಟ್‌ಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಪಾಲಿಕೆ ಮುಂದಾಗಿದೆ

Leave a Reply

Your email address will not be published. Required fields are marked *