IPL 2026: ಅಂಪೈರ್ ಜೊತೆ ಜಗಳವಾಡಿದ ನಿತೀಶ್ ರಾಣಾಗೆ ದಂಡ; ಸಿಎಸ್‌ಕೆ ನಾಯಕ ರುತುರಾಜ್‌ಗೂ ಬಿತ್ತು ಭಾರಿ ಮೊತ್ತದ ಫೈನ್!

ಚೆನ್ನೈನಲ್ಲಿ ನಡೆದ ಐಪಿಎಲ್ 2026ರ 18ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಜಯಭೇರಿ ಬಾರಿಸಿದರೂ, ಉಭಯ ತಂಡಗಳ ಪ್ರಮುಖ ಆಟಗಾರರು ಶಿಸ್ತು ಕ್ರಮದ ಬಲೆಗೆ ಬಿದ್ದಿದ್ದಾರೆ. ಅಂಪೈರ್ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನಿತೀಶ್ ರಾಣಾ ಮತ್ತು ಸ್ಲೋ ಓವರ್ ರೇಟ್ ಕಾರಣಕ್ಕೆ ರುತುರಾಜ್ ಗಾಯಕ್ವಾಡ್ ಶಿಕ್ಷೆಗೆ ಗುರಿಯಾಗಿದ್ದಾರೆ.

ನಿತೀಶ್ ರಾಣಾ ವಾಗ್ವಾದ ಮತ್ತು ದಂಡ:

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟರ್ ನಿತೀಶ್ ರಾಣಾ ಅವರು 19ನೇ ಓವರ್‌ನಲ್ಲಿ ನಾಲ್ಕನೇ ಅಂಪೈರ್ ಜೊತೆ ತೀವ್ರ ವಾಗ್ವಾದ ನಡೆಸಿದರು. ಟ್ರಿಸ್ಟಾನ್ ಸ್ಟಬ್ಸ್ ಬೆವರಿನ ಕಾರಣ ಗ್ಲೌಸ್ ಬದಲಿಸಲು ವಿನಂತಿಸಿದಾಗ ಅಂಪೈರ್ ನಿರಾಕರಿಸಿದ್ದರು. ಈ ವಿಚಾರವಾಗಿ ಅಸಮಾಧಾನಗೊಂಡ ರಾಣಾ, ಅನುಚಿತ ಭಾಷೆ ಬಳಸಿದ ಕಾರಣ ಪಂದ್ಯದ ಶುಲ್ಕದ 25 ಪ್ರತಿಶತ ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ಶಿಕ್ಷೆಗೆ ಒಳಗಾಗಿದ್ದಾರೆ.

ರುತುರಾಜ್ ಗಾಯಕ್ವಾಡ್‌ಗೆ 12 ಲಕ್ಷ ದಂಡ:

ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್‌ಗೆ ಸ್ಲೋ ಓವರ್ ರೇಟ್ ಬಿಸಿ ತಟ್ಟಿದೆ. ಪಂದ್ಯದ ವೇಳೆ ನಿಗದಿತ ಸಮಯದಲ್ಲಿ ಓವರ್‌ಗಳನ್ನು ಮುಗಿಸದ ಕಾರಣ ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಈ ಸೀಸನ್‌ನಲ್ಲಿ ಸಿಎಸ್‌ಕೆ ಮಾಡಿದ ಮೊದಲ ತಪ್ಪು ಇದಾದ ಕಾರಣ ಕೇವಲ ನಾಯಕನಿಗೆ ಮಾತ್ರ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.

  • ಸಂಜು ಸ್ಯಾಮ್ಸನ್ ಅವರ ಅಜೇಯ 115 ರನ್ಗಳ ನೆರವಿನಿಂದ ಸಿಎಸ್‌ಕೆ 212 ರನ್ ಗಳಿಸಿತು.
  • ಡೆಲ್ಲಿ ಕ್ಯಾಪಿಟಲ್ಸ್ 23 ರನ್‌ಗಳ ಅಂತರದಿಂದ ಸೋಲನುಭವಿಸಿತು.
  • ನಿತೀಶ್ ರಾಣಾ ಪ್ಲೇಯಿಂಗ್ 11 ನಲ್ಲಿ ಇಲ್ಲದಿದ್ದರೂ, ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಯಲ್ಲಿದ್ದಾಗ ಅಂಪೈರ್ ಜೊತೆಗಿನ ವರ್ತನೆಗಾಗಿ ದಂಡ ತೆತ್ತಿದ್ದಾರೆ

Leave a Reply

Your email address will not be published. Required fields are marked *