ಬೆಳಗಾವಿಯಲ್ಲಿ ಪೆಟ್ರೋಲ್ ಆತಂಕ: ಯುದ್ಧದ ಹಿನ್ನೆಲೆ ‘ನೋ ಸ್ಟಾಕ್’ ವದಂತಿ; ಮಧ್ಯರಾತ್ರಿಯಲ್ಲೂ ಬಂಕ್ಗಳಿಗೆ ಮುಗಿಬಿದ್ದ ಜನರು! ಪ್ಯಾನಿಕ್ ಬುಕ್ಕಿಂಗ್ ಬೇಡ.
ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಇರಾನ್-ಇಸ್ರೇಲ್-ಅಮೆರಿಕ ನಡುವಿನ ಯುದ್ಧದ ಕಾರ್ಮೋಡಗಳು ಈಗ ನೇರವಾಗಿ ಭಾರತದ ಅಡುಗೆಮನೆ ಮತ್ತು ವಾಹನ ಸವಾರರ ಮೇಲೆ ಪ್ರಭಾವ ಬೀರಲಾರಂಭಿಸಿವೆ. ವಿಶೇಷವಾಗಿ ಕುಂದಾನಗರಿ ಬೆಳಗಾವಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅಭಾವ ಉಂಟಾಗಲಿದೆ ಎಂಬ ಗಾಳಿ ಸುದ್ದಿಯು ಸಾರ್ವಜನಿಕರಲ್ಲಿ ಭಾರಿ ಪ್ಯಾನಿಕ್ (Panic) ಸೃಷ್ಟಿಸಿದೆ. ಬೆಳಗಾವಿಯಲ್ಲಿ ಮಧ್ಯರಾತ್ರಿ ‘ತೈಲ’ ಜಂಗೀ ಕುಸ್ತಿ! ಸಾಮಾಜಿಕ ಜಾಲತಾಣಗಳಲ್ಲಿ “ಇನ್ನು ಕೆಲವೇ ದಿನಗಳಲ್ಲಿ ಪೆಟ್ರೋಲ್ ಸ್ಟಾಕ್ ಖಾಲಿಯಾಗಲಿದೆ, ಬೆಲೆ ದುಪ್ಪಟ್ಟಾಗಲಿದೆ” ಎಂಬ ಸಂದೇಶಗಳು ವೈರಲ್ ಆಗುತ್ತಿದ್ದಂತೆ ಬೆಳಗಾವಿ ನಗರದ ಚಿತ್ರಣವೇ…

