ಪುಷ್ಪ ಸ್ಟಾರ್ ಅಲ್ಲು ಅರ್ಜುನ್ 44ನೇ ಜನ್ಮದಿನ.ಅವರ ಕೋಟಿ ಕೋಟಿ ಆಸ್ತಿ, ಐಷಾರಾಮಿ ಮನೆ ಮತ್ತು ಕಾರುಗಳ ಬಗ್ಗೆ ಗೊತ್ತೇ?..
ತೆಲುಗು ಚಿತ್ರರಂಗದ ‘ಐಕಾನ್ ಸ್ಟಾರ್’ ಎಂದೇ ಖ್ಯಾತರಾಗಿರುವ ಅಲ್ಲು ಅರ್ಜುನ್ (Allu Arjun) ಇಂದು ತಮ್ಮ 44ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ‘ಗಂಗೋತ್ರಿ’ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ಅಲ್ಲು ಅರ್ಜುನ್, ಇಂದು ‘ಪುಷ್ಪ’ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ. ಕೇವಲ ನಟನೆಯಷ್ಟೇ ಅಲ್ಲದೆ, ತಮ್ಮ ವಿಶಿಷ್ಟ ಡ್ಯಾನ್ಸ್ ಮತ್ತು ಸ್ಟೈಲ್ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ವಿಶೇಷ ದಿನದಂದು ಬನ್ನಿ ಅವರ ಶ್ರೀಮಂತಿಕೆ ಮತ್ತು ಜೀವನಶೈಲಿಯ ಬಗ್ಗೆ ಆಸಕ್ತಿದಾಯಕ ಮಾಹಿತಿಗಳು ಇಲ್ಲಿವೆ….

