ಕಾವೇರಿ ನದಿಯಲ್ಲಿ ಪ್ರವಾಸಿಗರ ಮೇಲೆ ಕಾಡಾನೆ ದಾಳಿ – ಮೇಕೆದಾಟು ಬಳಿ ಮಹಿಳೆಗೆ ಗಾಯ
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಂಗಮ ಅರಣ್ಯ ಪ್ರದೇಶದಲ್ಲಿ ಭಯಾನಕ ಘಟನೆ ನಡೆದಿದೆ. ಕಾವೇರಿ ನದಿ ಯಲ್ಲಿ ಆಟವಾಡುತ್ತಿದ್ದ ಪ್ರವಾಸಿಗರ ಮೇಲೆ ಕಾಡಾನೆ ದಾಳಿ ನಡೆಸಿದೆ. ಮೇಕೆದಾಟು ಸಮೀಪದ ಸಂಗಮ ಅರಣ್ಯ ಪ್ರದೇಶಕ್ಕೆ ನೀರು ಕುಡಿಯಲು ಬಂದಿದ್ದ ಕಾಡಾನೆ, ಏಕಾಏಕಿ ಅಲ್ಲಿದ್ದ ಪ್ರವಾಸಿಗರ ಮೇಲೆ ಎರಗಿದೆ. ಘಟನೆ ನೋಡಿದ ಪ್ರವಾಸಿಗರು ಭಯದಿಂದ ಎದ್ನೋಬಿದ್ನೋ ಓಡಿಹೋಗಿದ್ದಾರೆ. ಈ ಗದ್ದಲದ ನಡುವೆ ಒಬ್ಬ ಮಹಿಳೆಯ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡ ಮಹಿಳೆಯನ್ನು ತಕ್ಷಣವೇ ಸ್ಥಳೀಯ…

