ಚಿಕ್ಕಮಗಳೂರಿನಲ್ಲಿ ನಾಪತ್ತೆಯಾಗಿದ್ದ ಕೇರಳದ 15 ವರ್ಷದ ಬಾಲಕಿ ಶವವಾಗಿ ಪತ್ತೆ: ಮಾಣಿಕ್ಯಧಾರೆ ಜಲಪಾತದ ಬಳಿ ದುರಂತ!
ಪ್ರವಾಸಕ್ಕೆಂದು ಬಂದಿದ್ದ ಕುಟುಂಬವೊಂದು ಮಹಾ ದುರಂತಕ್ಕೆ ಸಾಕ್ಷಿಯಾಗಿದೆ. ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣವಾದ ಬಾಬಾಬುಡನ್‌ಗಿರಿ ಬೆಟ್ಟದ ಸಾಲಿನಲ್ಲಿರುವ ಮಾಣಿಕ್ಯಧಾರೆ ಜಲಪಾತದ ಬಳಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಕೊನೆಗೂ ಶವವಾಗಿ ಪತ್ತೆಯಾಗಿದ್ದಾಳೆ. ಈ ಘಟನೆ ಪ್ರವಾಸಿಗರಲ್ಲಿ ಮತ್ತು ಸ್ಥಳೀಯರಲ್ಲಿ ತೀವ್ರ ವಿಷಾದ ಮೂಡಿಸಿದೆ. ಕೇರಳದ ಪಾಲಕ್ಕಾಡ್ ಮೂಲದ 15 ವರ್ಷದ ಬಾಲಕಿ ಶ್ರೀನಂದಾ, ತನ್ನ ಕುಟುಂಬದವರೊಂದಿಗೆ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬಂದಿದ್ದಳು. ಕಳೆದ ಮಂಗಳವಾರ ಸಂಜೆ (ಏಪ್ರಿಲ್ 8) ಮಾಣಿಕ್ಯಧಾರೆ ಜಲಪಾತವನ್ನು ನೋಡಲು ಹೋದಾಗ ಆಕೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಕುಟುಂಬಸ್ಥರು…

