ವಿಶ್ವ ವ್ಯಾಪಾರ ಸಂಸ್ಥೆ (WTO) ಮತ್ತು ಭಾರತ: ಸರ್ವಾನುಮತದ ನಿರ್ಧಾರವೇ ಸಂಸ್ಥೆಯ ಬುನಾದಿ – ಪಿಯೂಷ್ ಗೋಯಲ್.
ಜಾಗತಿಕ ವ್ಯಾಪಾರ ವ್ಯವಹಾರಗಳಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯನ್ನು ಕಾಪಾಡುವಲ್ಲಿ ವಿಶ್ವ ವ್ಯಾಪಾರ ಸಂಸ್ಥೆ (WTO) ಪ್ರಮುಖ ಪಾತ್ರ ವಹಿಸುತ್ತದೆ. ಇತ್ತೀಚೆಗೆ ಕ್ಯಾಮರೂನ್‌ನ ಯಾವುಂಡೆಯಲ್ಲಿ ನಡೆದ WTOನ 14ನೇ ಸಚಿವ ಮಟ್ಟದ ಸಮ್ಮೇಳನದಲ್ಲಿ (MC14), ಭಾರತದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಭಾರತದ ಪರವಾಗಿ ಪ್ರಬಲ ಧ್ವನಿ ಎತ್ತಿದ್ದಾರೆ. ಸರ್ವಾನುಮತದ ನಿರ್ಧಾರಗಳೇ ಶಕ್ತಿ ಸಮ್ಮೇಳನದ ಎರಡನೇ ದಿನದಂದು ಮಾತನಾಡಿದ ಪಿಯೂಷ್ ಗೋಯಲ್, “ಸರ್ವಾನುಮತದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯು WTOನ ಕಾನೂನುಬದ್ಧತೆಯ ಮೂಲಾಧಾರವಾಗಿದೆ” ಎಂದು…

