ಖಾರದ ಪುಡಿ ಎರಚಿ ಚಿನ್ನದಂಗಡಿ ಲೂಟಿ: ಡ್ರೋನ್ ಮೂಲಕ ಕಾರ್ಯಾಚರಣೆ ನಡೆಸಿ ಅಂತರ್ ರಾಜ್ಯ ದರೋಡೆಕೋರರ ಬಂಧನ!
ತುಮಕೂರು: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ನಡೆದಿದ್ದ ಸಿನಿಮೀಯ ಮಾದರಿಯ ಚಿನ್ನದಂಗಡಿ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ತುಮಕೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಕಣ್ಣಿಗೆ ಖಾರದ ಪುಡಿ ಎರಚಿ ಪರಾರಿಯಾಗಿದ್ದ ನಾಲ್ವರು ಅಂತರ್ ರಾಜ್ಯ ದರೋಡೆಕೋರರನ್ನು ಪೊಲೀಸರು ‘ಡ್ರೋನ್’ ಕಾರ್ಯಾಚರಣೆಯ ಮೂಲಕ ಸೆರೆಹಿಡಿದಿದ್ದಾರೆ. ಘಟನೆಯ ಹಿನ್ನೆಲೆ: ಮಂಗಳವಾರ (ಫೆಬ್ರವರಿ 24) ಹಗಲು ಹೊತ್ತಿನಲ್ಲೇ ಈ ಭಯಾನಕ ಕೃತ್ಯ ನಡೆದಿತ್ತು. ಹೆದ್ದಾರಿಯ ಸಮೀಪವಿರುವ ಜ್ಯುವೆಲ್ಲರಿ ಶಾಪ್‌ಗೆ ಗ್ರಾಹಕರಂತೆ ಪ್ರವೇಶಿಸಿದ ನಾಲ್ವರು ದರೋಡೆಕೋರರು, ಮಾಲೀಕರು ಆಭರಣ ತೋರಿಸುತ್ತಿದ್ದಂತೆ ಅವರ ಕಣ್ಣಿಗೆ ತಂದಿದ್ದ ಖಾರದ…

